ಮಂಗಳೂರಿನಿಂದ ೩೫ ಕಿಲೋಮೀಟರ್ ದೂರದಲ್ಲಿ ಕರ್ನಾಟಕ ಕೇರಳ ರಾಜ್ಯಗಳ ಗಡಿಯಲ್ಲಿರುವ ಬಂಟ್ವಾಳ ತಾಲೂಕಿನ ಸಣ್ಣ ಹಳ್ಳಿ ಆನೇಕಲ್ಲು. ಈ ಉರು ತಲುಪಲು ಮಂಗಳೂರಿನಿಂದ ೧೯೮೫ ರಲ್ಲಿ ಇದ್ದದ್ದು ಎರಡು ಖಾಸಗಿ ಬಸ್ಸುಗಳು ಒಂದು ಶಂಕರ್ ವಿಟ್ಟಲ್ ಇನ್ನೊಂದು ಶಿವ ಶಂಕರ್ ಈ ಬಸ್ಸುಗಳು ಕರ್ನಾಟಕದ ಕೆಟ್ಟ ರಸ್ತೆಯಲ್ಲಿ ಮುಡಿಪು ಬಾಕ್ರೆಬೈಲು ದಾರಿಯಲ್ಲಿ ಆನೇಕಲ್ಲು ತಲುಪುತ್ತಿದ್ದವು.
ಬೇಸಿಗೆ ರಜೆ ಬಂತು ಎಂದರೆ ನಮ್ಮ ಸವಾರಿ ಈ ಬಸ್ಸಿನಲ್ಲೇ. ಮದ್ಯಾಹ್ನ ೧.೩೦ ಶಂಕರ್ ವಿಟ್ಟಲ್ ಬಸ್ಸು ಮಂಗಳೂರು ಬಿಟ್ಟರೆ ಸರಿಯಾಗಿ ೩.೩೦ ಕ್ಕೆ ಆನೇಕಲ್ಲು ತಲುಪುತ್ತ್ತಿತ್ತು . ಆನೇಕಲ್ಲು ಇಳಿದರೆ ಬಸ್ ಸ್ಟಾಂಡ್ ಹತ್ತಿರದಲ್ಲೇ ಹೋಟೆಲು , ಅಲ್ಲಿ ಒಂದು ರೂಪಾಯಿಗೆ ಎರಡು ಗೋಳಿಬಜೆ, ಎರಡು ರೂಪಾಯಿಗೆ ಒಂದು ಬನ್ಸು ತಿಂದು ಬಿಸಿ ಬಿಸಿ ಚಹಾ ಕುಡಿದು ನಡೆಯಲು ಆರಂಬಿಸಿದರೆ ಸರಿಯಾಗಿ ೫.೦೦ ಗಂಟೆಗೆ ನಮ್ಮ ಅಜ್ಜಿಮನೆ ತಲುಪುವ ಹೊತ್ತಿಗೆ ಹೋಟೆಲಲ್ಲಿ ತಿಂದ ಗೋಳಿಬಜೆ, ಬನ್ಸು ಎರಡು ಖಾಲಿ
ಅಜ್ಜಿ ಮನೆ ನಮ್ಮ ನೆಚ್ಚಿನ ಮನೆ ನಮ್ಮ ಬಾಲ್ಯದ ಹಲವಾರು ಸವಿನೆನಪುಗಳನ್ನು ಹೊತ್ತ ಮನೆ ಅಜ್ಜಿ ಮನೆಯಲ್ಲಿ ಬಡತನ ಇದ್ದರೂ ಪ್ರೀತಿಗೆ ಕೊರತೆ ಇರಲಿಲ್ಲ